ಸೋಮವಾರ, ಆಗಸ್ಟ್ 9, 2010

ಆಧ್ಯಾತ್ಮದ ಬೆಳೆ ತೆಗೆದ ಸಖರಾಯಪಟ್ಟಣದ ಸಾಧಕ ಚಿಕ್ಕಮಗಳೂರು ಜ್ಲಿಲೆ ಸಖರಾಯಪಟ್ಟಣ ಪ್ರದೇಶಕ್ಕೇ ಒಂದು ಅವಧೂತತನದ ಶಕ್ತಿ ಇದೆ. ಆಧ್ಯಾತ್ಮವನ್ನು ಗ್ರಾಮೀಣ ಭಾಷೆಯ್ಲಲಿ ವಿವರಿಸಿ ರೈತರ ಮನ ಗ್ದೆದ್ದಿದ ಮುಕುಂದೂರುಸ್ವಾಮಿಗಳು ಓಡಾಡಿದ ಇದೇ ಸ್ಥಳದ್ಲಲಿ ಕೆ.ವೆಂಕಟಾಚಲಯ್ಯ (೭೦) ಎಂಬ ಆಧ್ಯಾತ್ಮಜ್ಯೋತಿ ಹಲವು ವರ್ಷಗಳ ಕಾಲ ದೇದೀಪ್ಯಮಾನವಾಗಿ ಬೆಳಗಿತ್ತು. ಕಳೆದ ಶನಿವಾರ (ಜುಲೈ ೩೧) ಅನಂತದ್ಲಲಿ ಲೀನವಾದ ವೆಂಕಟಾಚಲಯ್ಯ ಈ ಭಾಗದ ಎಲ ವರ್ಗ/ಜಾತಿಯ ಮನಗ್ದೆದ ಸಾಧಕರು. ಇವರ ಸಾಧನೆಯನ್ನು ಸ್ವತಃ ಶೃಂಗೇರಿ ಗುರುಗಳು ಮೆಚ್ಚಿ ಗೌರವಿಸ್ದಿದರು! ಅತ್ತ ಸಂಸಾರಿಗಳೂ ಅಲದ, ಇತ್ತ ಸನ್ಯಾಸಿಗಳೂ ಅಲದ, ಸಂಸಾರದ್ಲಲಿ ಇದೂ ಸನ್ಯಾಸಿಯಂತೆ ಬಾಳುವ ಒಂದು ಆಧ್ಯಾತ್ಮಿಕ ಸ್ಥಿತಿಯನ್ನು ಅವಧೂತ ಸ್ಥಿತಿ ಎನ್ನಲಾಗುತ್ತದೆ. ಜಗನ್ನಾಥದಾಸರ ‘ರಂಗ ನಿನ್ನ ಕೊಂಡಾಡುವೋ ಮಂಗಳಾತ್ಮರಾ...’ ಕೀರ್ತನೆ ಈ ಸ್ಥಿತಿಯನ್ನು ಉತ್ತಮವಾಗಿ ವರ್ಣಿಸುತ್ತದೆ. ‘ಮೂಕಬಧಿರರಂತಿಪ್ಪರೋ ನೋಳ್ಪ ಜನಕೆ ಕಾಕುಯುಕುತಿಗಳನವರು ತಾಳರೋ ಮನಕೆ’ ಹಾಗೂ ‘ನಗುವರೋ ರೋದಿಸುವರೋ ನಾಟ್ಯವಾಡುವರೋ ಬಗೆಯರೋ ಬಡತನ ಭಾಗ್ಯ ಭಾಗವತರು’ ಎಂಬ ಸಾಲುಗಳಿಗೆ ಉದಾಹರಣೆಯಂತೆ ಬದುಕಿ ತೋರಿಸಿದವರು ಸಖರಾಯಪಟ್ಟಣದ ವೆಂಕಟಾಚಲಯ್ಯ. ಇವರನ್ನು ಇಲಿನ ಜನ ಪ್ರೀತಿಯಿಂದ ವೆಂಕಟಾಚಲ ಸ್ವಾಮಿಗಳು, ಸಖರಾಯಪಟ್ಟಣದ ಅವಧೂತರು, ಗುರೂಜಿ ಎಂದ್ಲೆಲಾ ಕರೆಯುತ್ತ್ದಿದರು. ಲೌಕಿಕದ್ಲಲಿ ಮನುಷ್ಯನೊಬ್ಬ ಎದುರಿಸುವ ಸಮಸ್ಯೆಗಳಿಗೆ ಆಧ್ಯಾತ್ಮದ ಕಾರಣಗಳೂ ಇರುತ್ತವೆ ಎಂಬುದನ್ನು ವೆಂಕಟಾಚಲಯ್ಯ ಅರಿತ್ದಿದರು. ಅವರ ದೈನಂದಿನ ನಡವಳಿಕೆಯ್ಲಲಿ ಈ ಅಂಶ ಎದು ಕಾಣುತ್ತಿತ್ತು. ಸಂವಾದಗಳು: ಉಪನ್ಯಾಸಗಳ ಮೂಲಕ ಆಧ್ಯಾತ್ಮ ಹಂಚುವುದಕ್ಕಿಂತ ಸಂವಾದದ ಮೂಲಕ ಆಧ್ಯಾತ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವುದು ವೆಂಕಟಾಚಲಸ್ವಾಮಿಗಳು ಅನುಸರಿಸಿದ ಮಾರ್ಗ. ಅವರು ಊರ್ಲಲಿ ಇದರು ಎಂದರೆ ಮನೆಯ್ಲಲಿ ಜನಜಾತ್ರೆ, ಕಾಫಿ- ದೋಸೆಗಳ ಸಮಾರಾಧನೆ. ಒಬ್ಬ ವ್ಯಕ್ತಿ, ‘ಸ್ವಾಮಿ ಮೇಲಧಿಕಾರಿ ಸರಿಯ್ಲಿಲ. ಕೆಲ್ಸ ಬಿಡ್ಬೇಕು ಅನ್ನಿಸ್ತಿದೆ. ಈ ವರ್ಷ ವರ್ಗಾವಣೆಯಾದ್ರೂ ಕೇಳ್ತೀನಿ. ನಿಮ್ಮ ಚಿತ್ತ ಹೇಗೆ’ ಎಂದು ಕೇಳಿದರೆ ಇವರು, ‘ಬೇಡಪ್ಪ ತಾಳು. ಮುಂದೆ ಒಳ್ಳೇದಾಗುತ್ತೆ. ಒಂದು ವರ್ಷ ತಡೀ. ನಿನ್ನ ಮನಸ್ಸಿನ್ಲಲಿರೋದು ಆಗುತ್ತೆ. ಯಾವತ್ತೂ ಬೇರೆಯವರ ಬಗ್ಗೆ ಕೆಟ್ಟ್ದದು ಯೋಚ್ನೆ ಮಾಡಬೇಡ. ಒಂದುವೇಳೆ ನೀನು ಅಂದುಕೊಂಡಂತೆ ಅವನಿಗೆ ಕೆಟ್ಟ್ದದು ಆದ್ರೂ ನಿನ್ನ ಮನಸಿಗೆ ಪಾಪಪ್ರಜ್ಞೆ ಕಾಡುತ್ತೆ. ನಿಂಗೆ ಪಾಪ ಬರುತ್ತೆ.’ ಎನ್ನುವ ಮೂಲಕ ಅವನಿಗೆ ಆತ್ಮವಿಶ್ವಾಸ ತುಂಬುವ ಜತೆಜತೆಗೇ ಆಲೋಚನೆಯನ್ನೂ ತ್ದಿದುತ್ತ್ದಿದರು. ಈಗ್ಗೆ ೬ ತಿಂಗಳ ಹಿಂದೆ ನಾನು ಸ್ವಾಮಿಗಳ ಮನೆಗೆ ಹೋಗ್ದಿದಾಗ ವ್ಯಕ್ತಿಯೊಬ್ಬ ಹೊಸದಾಗಿ ಮದುವೆಯಾದ ತನ್ನ ತಂಗಿಯ ಸಂಸಾರ ಸರಿಯ್ಲಿಲವೆಂದು ಬೇಸರದಿಂದ ಸ್ವಾಮಿಗಳ ಬಳಿ ಮಾತನಾಡುತ್ತ್ದಿದ. ‘ಮುಂದೆ ಸರಿ ಹೋಗುತ್ತೆ. ಅವ್ರ ಸಂಸಾರ ಸರೀಮಾಡಕ್ಕೆ ನೀನು ಹೋದ್ರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತೆ. ಅವ್ರಪಾಡಿಗೆ ಅವ್ರನ್ನ ಬಿಡು. ಈ ತೆಂಗಿನಕಾಯಿ ತಗೊಂಡು ಹೋಗಿ ತಂಗಿಗೆ ಕೊಡು. ಎಲಾ ಒಳ್ಳೇದಾಗುತ್ತೆ’ ಎಂದು ಸಂಸಾರದ ನೀತಿಪಾಠ ಹೇಳ್ದಿದರು. ಭಕ್ತನೊಬ್ಬ ಬಾಳೆಹಣ್ಣು ನೀಡಿದರೆ, ಅದನ್ನು ಕೈಲಿ ಹಿಡಿದು ‘ಬಾಳು ಹಣ್ಣಾಗಬೇಕು- ಮನಸು ಮಾಗಬೇಕು’ ಎಂದು ಹೇಳುವ ಮೂಲಕ ಆಧ್ಯಾತ್ಮ ಪಾಠಕ್ಕೆ ಶ್ರೀಕಾರ ಹಾಕುತ್ತ್ದಿದರು. ಹಲವು ಸಮಸ್ಯೆಗಳನ್ನು ಹೊತ್ತು ಬಂದವರಿಗೆ ಅಡಿಕೆ, ವಿಳ್ಳೇದೆಲೆ, ತೆಂಗಿನಕಾಯಿ ಇತ್ಯಾದಿ ನೀಡಿ ‘ಇದನ್ನ ಜೋಪಾನವಾಗಿ ಇಟ್ಕೋ. ಚೆನ್ನಾಗಿ ಕೆಲ್ಸ ಮಾಡು. ನಿನ್ನ ಕಷ್ಟ ದೇವರಿಗೆ ಬಿಡು’ ಎಂದು ಹೇಳಿ ಅವರ ಕ್ರಿಯಾಶಕ್ತಿ ಹೆಚ್ಚಿಸಿ ಮನಸಿಗೆ ನೆಮ್ಮದಿ ತಂದುಕೊಡುತ್ತ್ದಿದರು. ನೋಡುವ ಜನರ ಕಣ್ಣಿಗೆ ಅವರು ಜನಿವಾರ ಧರಿಸಿದ ಬ್ರಾಹ್ಮಣರಾದರೂ ಹುಟ್ಟಿನ ಆಧಾರದ ಶ್ರೇಷ್ಠತ್ವವನ್ನು ಅವಧೂತರು ಎಂದಿಗೂ ಒಪ್ಪಿರಲ್ಲಿಲ. ‘ಬ್ರಾಹ್ಮಣ ಎಂದಾಗುವುದು ಆಚರಣೆಯಿಂದ, ನಿಸ್ಸಂಗತ್ವದಿಂದ, ನಿರಂತರತೆ, ನಿರುಪಮಭಾವನೆ, ನಿರಾತಂಕತೆ ಇರೋನು ಬ್ರಾಹ್ಮಣ’ ಎನ್ನುವುದು ಅವರು ನೀಡುತ್ತ್ದಿದ ವ್ಯಾಖ್ಯಾನ. ‘ಸನ್ಯಾಸಕ್ಕಿಂತ ಗೃಹಸ್ಥಾಶ್ರಮ ಶ್ರೇಷ್ಠ, ಪರಮಾರ್ಥದ್ಲಲಿ ಏನೂ ಇಲ, ಇರೋದು ಲೌಕಿಕದ್ಲಲಿ. ಕುಟುಂಬ, ದಂಪತಿ ಅಥವಾ ಸಂಸಾರವೆಂದರೆ ಕೇವಲ ಗಂಡ- ಹೆಂಡತಿ ಅಲ. ಸಂಸಾರ ಅಂದ್ರೆ ಪ್ರಪಂಚ; ಮನಸ್ಸು ಸಮುದ್ರದಂತೆ ಇರಬೇಕು. ಸಮುದ್ರ ತನ್ನ್ಲಲಿ ಏನನ್ನೂ ಇಟ್ಟುಕೊಳ್ಳದೆ ಎಲವನ್ನೂ ಎತ್ತಿ ಹೊರಹಾಕುತ್ತದೆ. ನಮ್ಮ ಜೀವನ ಇದೇ ರೀತಿ ಸಾಗಬೇಕು’ ಎಂಬ ಮಾತು ಅವರ ಬಾಯಿಂದ ಪದೇಪದೆ ತೇಲಿ ಬರುತ್ತಿತ್ತು. ‘ಕೊಟ್ಟವರನ್ನು ಮರೀಬೇಡ, ನಂದೇ ಹೆಚ್ಚು ಅಂತ ಮೆರೀಬೇಡ, ಯಾರ ಮನಸ್ಸನ್ನೂ ಮುರೀಬೇಡ’ ಎಂಬುದು ಅವರ ಎಲ ಉಪದೇಶದ ಅಂತರಾರ್ಥವಾಗಿರುತ್ತಿತ್ತು ಎಂದು ಅವರ ಬಗ್ಗೆ ತುಂಬ ಗೌರವ ಇಟ್ಟುಕೊಂಡ್ದಿದ ಚಿಕ್ಕಮಗಳೂರಿನ ಹಿರಿಯ ಪತ್ರಕರ್ತರ ಸ.ಗಿರಿಜಾಶಂಕರ ಹೇಳುತ್ತಾರೆ. ಭಾಗ್ಯ ದೇವತೆ: ಚಿಕ್ಕಮಗಳೂರು ಜ್ಲಿಲೆಯ್ಲಲಿ ಸ್ವಾಮಿಗಳು ದಯಮಾಡಿಸಿದರು ಎಂದರೆ ಭಾಗ್ಯ ದೇವತೆಯೇ ಅವರ ಮನೆ ಬಾಗಿಲಿಗೆ ಬಂದಷ್ಟು ಸಂಭ್ರಮ ಮನೆಯವರ್ಲಲಿ ವ್ಯಕ್ತವಾಗುತ್ತಿತ್ತು. ತೀರಾ ಪ್ರಪಾತಕ್ಕೆ ಕುಸಿದು ಹೋಗ್ದಿದ ಎಷ್ಟೋ ಜನರನ್ನು ಅವರು ಕೈಹಿಡಿದು ಮೇಲಕ್ಕೆ ಎತ್ತ್ದಿದರು. ಇದಕ್ಕೆ ಚಿಕ್ಕಮಗಳೂರು ನಗರದ್ಲಲಿಯೇ ಹತ್ತಾರು ಉದಾಹರಣಗೆಗಳು ಸಿಗುತ್ತವೆ. ‘ಸ್ವಾಮಿಗಳು ಮನೆಗೆ ಬಂದು ಹಾಲು ಕುಡಿದರೆ ಅಲಿಗೆ ಆ ಮನೆ ಉದ್ಧಾರವಾಯಿತು ಎಂದೇ ಅರ್ಥ’ ಎಂದು ವೆಂಕಟಾಚಲ ಅವರ್ಲಲಿ ವಿಶ್ವಾಸವಿಟ್ಟ್ದಿದ ಗೃಹಿಣಿ ಚೈತ್ರ ಪ್ರವೀಣ್ ಹೇಳುತ್ತಾರೆ. ಸಖರಾಯಪಟ್ಟಣದಂಥ ಹಳ್ಳಿಗೆ ಸಾವಿರ ಸಾವಿರ ಸಂಖ್ಯೆಯ್ಲಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿ ಸ್ವಾಮಿಗಳ ಅಂತಿಮ ದರ್ಶನ ಪಡೆದ ಜನಸ್ತೋಮ ಆಡುತ್ತ್ದಿದ ಮಾತುಗಳೂ ಚೈತ್ರ ಅವರ ಮಾತಿಗೆ ಸಾಕ್ಷಿ ಹೇಳುತ್ತ್ದಿದವು. ‘ಮಠ, ಮಂದಿರ, ದೇವರಿಗೆ ಸೀಮಿತವಾಗದೆ ಸಮಾಜದ್ಲಲಿ ಆಧ್ಯಾತ್ಮದ ಬೆಳೆ ತೆಗೆಯಲು ಯತ್ನಿಸಿದ ವೆಂಕಟಾಚಲ ಗುರೂಜಿ ಅವರು ನಮ್ಮ ನಡುವೆಯೇ ಇಷ್ಟು ದಿನ ಇದರು ಎಂಬುದು ನಮ್ಮ ತಲೆಮಾರಿನ ಭಾಗ್ಯ’ ಎಂದ ಸಖರಾಯಪಟ್ಟಣದ ಓಂಕಾರಮೂರ್ತಿ ಅವರ ಮಾತು ಎಲವನ್ನೂ ವಿವರಿಸಬ್ಲಲದು. ಸಖರಾಯಪಟ್ಟಣದ ಅವಧೂತರು ಸಖರಾಯಪಟ್ಟಣದ ಕೆ.ವೆಂಕಟಾಚಲಯ್ಯ ಅವರು ಬೆಂಗಳೂರು ಸೆಂಟ್ರಲ್ ಕಾಲೇಜಿನ್ಲಲಿ ಇಂಟರ್ ಮೀಡಿಯಟ್ ಓದ್ದಿದರು. ಬಹುಕಾಲ ಒಮ್ಮ ಸಾಮಾನ್ಯ ಕೃಷಿಕನಂತೆ ಸಖರಾಯಪಟ್ಟಣದ್ಲಲ್ದಿದರು. ಅಯ್ಯನಕೆರೆ ಬ್ಲಲಾಳರಾಯ ದೇವಸ್ಥಾನ ಹಾಗೂ ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿ ದೇವಾಲಯದ ಸಂಚಾಲಕರಾಗಿಯೂ ಅವರು ಜವಾಬ್ದಾರಿ ನಿರ್ವಹಿಸ್ದಿದರು. ವೇದಾಗಮ, ಭಾರತೀಯ ತತ್ವಶಾಸ್ತ್ರ ದರ್ಶನಗಳ್ಲಲಿ ಅಧ್ಯಯನ ನಡೆಸ್ದಿದ ಅವರು ತಮ್ಮ ೫೦ನೇ ವಯಸ್ಸಿನಿಂದ ವಿರಾಗಿಗಳಾಗಿ ಅದ್ವೈತ ಸಿದ್ಧಾಂತದ ಬಗ್ಗೆ ಆಳವಾದ ಚಿಂತನೆ ನಡೆಸಲು ಪ್ರಾರಂಭಿಸಿದರು. ಕಾಲಾನುಕ್ರಮದ್ಲಲಿ ಅವಧೂತ ಆವೇಶ ಪ್ರಾಪ್ತವಾದ ನಂತರ ಐಹಿಕ ಆಕರ್ಷಣೆಗಳಿಂದ ಸಂಪೂರ್ಣ ವಿಮುಖರಾಗಿ ಜಾತಿ, ಮತ, ಪಂಥಗಳ ಬೇಲಿ ಕಳಚಿಕೊಂಡರು. ಕೆಲವೊಮ್ಮೆ ಅವರ ಮಾತುಗಳ ಅತೀಂದ್ರಿಯ ದೃಷ್ಟಿಯಿಂದ ಕೂಡಿರುತ್ತಿತ್ತು. ಕಣ್ಣಿಗೆ ಕಾಣದ ಘಟನೆಗಳನ್ನು ಕಂಡಷ್ಟೇ ಸ್ಪಷ್ಟವಾಗಿ ಮನಸ್ಸಿನ ಮೂಲಕ ಗ್ರಹಿಸಿ ಹೊರಹಾಕುತ್ತ್ದಿದ ಎಷ್ಟೋ ಸಂದರ್ಭಗಳನ್ನು ಅವರ ಶಿಷ್ಯರು ಇಂದಿಗೂ ಮೆಲುಕು ಹಾಕುತ್ತಾರೆ. ಒಂದು ಸಾಂಸ್ಥಿಕ ಧರ್ಮದ ಚೌಕಟ್ಟಿಗೆ ಭಕ್ತರನ್ನು ಸೀಮಿತಗೊಳಿಸದೆ ನಿಜವಾದ ಧರ್ಮದ ತಿರುಳನ್ನು ತಿಳಿಹೇಳುವ ಮೂಲಕ ಸಮಾಜದ್ಲಲಿ ಧಾರ್ಮಿಕ ಶ್ರದ್ಧೆ ಬೆಳೆಸುವ ಮಹತ್ವದ ಕಾರ್ಯವನ್ನು ಅವರು ತಮ್ಮ ಜೀವಿತಾವಧಿಯ್ಲಲಿ ಸಾಧಿಸಿ ತೋರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ