ಸೋಮವಾರ, ಡಿಸೆಂಬರ್ 21, 2009

ಚಿಕ್ಕಮಗಳೂರಿನಲ್ಲಿ ಶ್ರೀನಿವಾಸ ಕಲ್ಯಾಣ

ಚಿಕ್ಕಮಗಳೂರು: ಹರಿದಾಸ ಸಂಗೀತ, ವೇದಘೋಷ, ಗೋವಿಂದ ನಾಮ ಸ್ಮರಣೆಗಳ ನಡುವೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು. ಉತ್ಸವದ ಆಯೋಜಕ ವೆಂಕಟಸುಬ್ಬರಾವ್ ಮತ್ತು ಗೀತಾ ದಂಪತಿಗಳು ಭಕ್ತರ ಪರವಾಗಿ ಕಲ್ಯಾಣೋತ್ಸವದ ಸಂಕಲ್ಪ ಮಾಡಿದರು. ತಿರುಪತಿಯಿಂದ ಆಗಮಿಸಿದ್ದ ವಾದಿರಾಜಾಚಾರ್ ಮತ್ತು ಆನಂದತೀರ್ಥಾಚಾರ್ ಅವರ ನೇತೃತ್ವದಲ್ಲಿ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಗಾಯಕರಾದ ಶಶಿಧರ್ ಕೋಟೆ, ನಂದಿನಿ ಸಂದರ್ಭಕ್ಕೆ ತಕ್ಕಂತೆ ದಾಸರ ಪದಗಳನ್ನು ಹೊಂದಿಸಿ ಹಾಡಿದರು. ಉಡುಪಿ ಮಠದ ವಿದ್ವಾಂಸ ಗೋಪಾಲಾಚಾರ್ಯ ಅಗತ್ಯ ಮಾರ್ಗದರ್ಶನ ನೀಡಿದರು. ವಾಸವಿ ಪೀಠಾಧಿಪತಿ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸ್ದಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ